exam notes

16/12/2021 Thursday Educational,Health,Employment and other news points in today's news paper cuttings

  *💫🍅 16.12.2021 ಗುರುವಾರದ ಶೈಕ್ಷಣಿಕ,ಆರೋಗ್ಯಹಾಗೂ 18 Fresh ಉದ್ಯೋಗ ಮಾಹಿತಿಗಳು* This cantent copyright owner  👇👇 http://www.kpscvani.com/2021/12/16122021-thursday-educationalhealthempl.html *👇🏿💚👇💜👇🏾❤️👇🏻💙* http://www.kpscvani.com/2021/12/16122021-thursday-educationalhealthempl.html   *<><><><><><><><><><><><>* *✍🏻 ವಿದ್ಯಾರ್ಥಿಗಳ ಬಸ್ ಪಾಸ್ ಮಿತಿ 100 ಕಿ.ಮಿ ಗೆ ?* *✍🏻 ಜಿಯೋ 1 ರೂ ಗೆ  30 ದಿನ ವ್ಯಾಲಿಡಿಟಿ ಆಫರ್ ಪ್ರಕಟ* *✍🏻 ಇಂದು ಮತ್ತೆ ನಾಳೆ ಸರಕಾರಿ ಬ್ಯಾಂಕ್ ನೌಕರರ ಮುಷ್ಕರ* *✍🏻 ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ* *✍🏻 ಬ್ರಿಟನ್ ನಲ್ಲಿ ಕೋವಿಡ್ ಮಹಾಸ್ಪೋಟ* *✍🏻 ನಾಸಾ ಸೂರ್ಯಚುಂಬನ ಹೊಸ ಇತಿಹಾಸ* *✍🏻 ಇನಾಮು ಭೂಮಿಗೆ ಪಹಣೆ:ಮಸೂದೆ ಮಂಡನೆ* *✍🏻 14 ಸದಸ್ಯರು ಮೇಲ್ಮನೆ ಕಲಾಪದಿಂದ ಅಮಾನತು* *✍🏻 ಡಿ.22 ಅಥವಾ 23 ಕ್ಕೆ ಮತಾಂತರ ಮಸೂದೆ ಮಂಡನೆ ?* *✍🏻 ವೋಟರ್ ಐಡಿ ಜೊತೆ ಆಧಾರ ಐಡಿ ಜೋಡಣೆ* *✍🏻 ರೈತರ ಹಣ ಪಾವತಿಗೆ ಅನುಮೋದನೆ* *✍🏻 ಜಾಲತಾಣದ ಮೇಲೆ ಪೋಲಿಸ್ ಹದ್ದಿನ ಕಣ್ಣು* *✍🏻 ಚಿಕಿತ್ಸೆ ಫಲಕಾರಿಯಾಗದೆ ಕ್ಯಾಪ್ಟನ್ ವರುಣ್ ನಿಧನ* *👆🏿 ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ👇🏿* http://www.kpscvani.com/...

ಎರೆಹುಳು ಗೊಬ್ಬರ ಘಟಕ ಸ್ಥಾಪನೆಗೆ 27000/- ಸಹಾಯಧನ ಹೇಗೆ ಪಡೆಯುವುದು

 

Spread the love



ಎರೆಹುಳು ಗೊಬ್ಬರ ಉತ್ಪಾದನಾ ಘಟಕ ಸ್ಥಾಪನೆಃ
ಎರೆಹುಳು ಗೊಬ್ಬರವು ಸಸ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸಸ್ಯ ವರ್ಧಕಗಳನ್ನೂ ಸಹ ಒದಗಿಸುತ್ತದೆ. ಇದರಿಂದಾಗಿ ಎರೆಹುಳು ಗೊಬ್ಬರವು ಒಂದು ಉತ್ತಮ ಸಾವಯವ ಗೊಬ್ಬರವೆನಿಸಿದೆ. ಎರೆಹುಳು ಗೊಬ್ಬರದ ಉತ್ಪಾದನೆಯು ಬಹಳ ಸುಲಭ ಮತ್ತು ಕಡಿಮೆ ಖರ್ಚಿನದು. ಸ್ಥಳೀಯವಾಗಿ ಎರೆಹುಳು ಗೊಬ್ಬರ ಉತ್ಪಾದನೆ ಹಾಗೂ ಬಳಕೆಯನ್ನು ಪೆÇ್ರೀತ್ಸಾಹಿಸಲು, ಕಡಿಮೆ ವೆಚ್ಚದ  ಜೋಡಿ ಅಂಕಣದ ಎರೆಹುಳು ಘಟಕ ಸ್ಥಾಪನೆಗೆ ಅವಕಾಶವಿರುತ್ತದೆ.
ಈ ಕಾರ್ಯಕ್ರಮಕ್ಕಾಗಿ 2020-21 ನೇ ಸಾಲಿನಲ್ಲಿ 10.00 ಲಕ್ಷ ರೂ. ಅನುದಾನವನ್ನು ಒದಗಿಸಲಾಗಿದೆ.  ಜಿಲ್ಲಾವಾರು ಭೌತಿಕ-ಆರ್ಥಿಕ ಗುರಿಗಳನ್ನು ಅನುಬಂಧ- 1 ರಲ್ಲಿ ನೀಡಲಾಗಿದೆ.  

ಎರೆಹುಳು ಗೊಬ್ಬರ ಉತ್ಪಾದನಾ ಘಟಕಗಳ ವಿನ್ಯಾಸ, ನಿರ್ಧಿಷ್ಟತೆಗಳು ಮತ್ತು ಅಂದಾಜು ವೆಚ್ಚದ ವಿವರಗಳು :
ವಿನ್ಯಾಸದ ವಿಧ:-

ನೆಲದ ಮೇಲೆ ಇಟ್ಟಿಗೆ ಮತ್ತು  ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿಸಲÁಗುವ ಆಯತಾಕಾರದ ತೊಟ್ಟಿಗಳು ಹೆಚ್ಚು ಸೂಕ್ತವೆಂದು ಕಂಡುಬಂದಿರುತ್ತದೆ.  ಎರೆಹುಳುಗಳನ್ನು ಬಿಡುವ ಮೊದಲು ತೊಟ್ಟಿಗಳಲ್ಲಿ ತುಂಬಿಸಲಾದ ಸಾವಯವ ಕಚ್ಛಾವಸ್ತುಗಳನ್ನು 30-40 ದಿನ ಅರೆ ಕಳೆಯಿಸುವುದು ಅತ್ಯವಶ್ಯಕವಾಗಿರುತ್ತದೆ.  ಈ ಒಂದು ಕ್ರಿಯೆಗೆ ಅನುಕೂಲವಾಗಲು ಒಂದೇ ತೊಟ್ಟಿಯ ಬದಲು ಎರಡು ತೊಟ್ಟಿಗಳನ್ನು ನಿರ್ಮಿಸುವುದು ಅಗತ್ಯ. ಆಗ ಒಂದು ತೊಟ್ಟಿಯಲ್ಲಿ ಹುಳುಗಳನ್ನು ಬಿಟ್ಟ ನಂತರ ಇನ್ನೊಂದು ತೊಟ್ಟಿಯಲ್ಲಿ ಕಚ್ಛಾವಸ್ತುಗಳನ್ನು ತುಂಬಿಸಿ ಅರೆ ಕಳಿಯಲು ಅನುವು ಮಾಡಿಕೊಡಲು ಸಾಧ್ಯವಾಗುತ್ತದೆ. ಅಷ್ಟರಲ್ಲಿ ಮೊದಲ ತೊಟ್ಟಿಯಲ್ಲಿ ಗೊಬ್ಬರ ತಯಾರಾಗಿರುತ್ತದೆ. ಅಲ್ಲಿಂದ ಹುಳುಗಳನ್ನು ಬೇರ್ಪಡಿಸಿ ಎರಡನೆಯ ತೊಟ್ಟಿಗೆ ಬಿಡಬಹುದು. ಈ ರೀತಿ ಪರ್ಯಾಯವಾಗಿ ಎರಡೂ ತೊಟ್ಟಿಗಳಲ್ಲಿ ಅರೆಕಳಿಯುವಿಕೆ ಅಥವಾ ಎರೆಹುಳು ಗೊಬ್ಬರ ತಯಾರಿಕೆ ನಡೆಯುತ್ತಿರುತ್ತದೆ. ವೆಚ್ಚ ಕಡಿಮೆ ಮಾಡಲು ಎರಡು ತೊಟ್ಟಿಗಳನ್ನು ಜೋಡಿ ತೊಟ್ಟಿಗಳ ರೂಪದಲ್ಲಿ ನಿರ್ಮಿಸುವುದು ಸೂಕ್ತ.
ವಿನ್ಯಾಸ / ಅಂಕಣದ ಅಳತೆ :-
15 ಅಡಿ ಉದ್ದ x 4 ಅಡಿ ಅಗಲ x 2.5 ಅಡಿ ಎತ್ತರದ ಎರಡು ಜೋಡಿ ತೊಟ್ಟಿಗಳನ್ನು ನಿರ್ಮಿಸುವುದು. (ವಿನ್ಯಾಸದ ನಿರ್ಧಿಷ್ಟತೆಗಳನ್ನು ಚಿತ್ರದಲ್ಲಿ ಕೊಡಲಾಗಿದೆ.)

ಅಂಕಣಕ್ಕೆ  ಚಪ್ಪರ :-
ಮಳೆಗಾಲದಲ್ಲಿ ಮಳೆ ನೀರಿನಿಂದ ಹಾಗೂ ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ರಕ್ಷಣೆ ಒದಗಿಸಲು ಚಪ್ಪರ ಅತ್ಯವಶ್ಯಕ. ಮರದ ಕಂಬಗಳು ಹಾಗೂ ತೆಂಗಿನ ಗರಿಗಳಿಂದ ಈ ಚಪ್ಪರವನ್ನು ನಿರ್ಮಿಸಬಹುದು.
ಚಪ್ಪರದ ಅಳತೆ :-20 ಅಡಿ ಉದ್ದ x 15 ಅಡಿ ಅಗಲ  x 10  ಅಡಿ ಎತ್ತರ

ಆರಂಭಿಕ ವೆಚ್ಚದ ಅಂದಾಜುಗಳು :-
ಅ) ನಿರ್ಮಾಣದ ವೆಚ್ಚಗಳು:-
  i) 15ಅಡಿ  x 4 ಅಡಿ x 2.5 ಅಡಿ ಅಳತೆಯ ಎರಡು ಜೋಡಿ  ತೊಟ್ಟಿಗಳ ನಿರ್ಮಾಣಕ್ಕೆ ಹಾಗೂ ಚಪ್ಪರ ಹಾಕಲು ಗುಂಡಿ ತೋಡಲು ರೂ. 2300-00
ii) ಇಟ್ಟಿಗೆ, ಮರಳು, ಜೆಲ್ಲಿ, ಸಿಮೆಂಟ್ ರೂ. 9958-00
iii) 20 ಅಡಿ x 15 ಅಡಿ x 10 ಅಡಿ ಅಳತೆಯ ಚಪ್ಪರ ನಿರ್ಮಾಣ ರೂ. 2000-00
ಆ) ಆರಂಭದಲ್ಲಿ  ಒಂದು ತೊಟ್ಟಿಗೆ ಬೇಕಾಗುವ ಎರೆಹುಳುಗಳ ವೆಚ್ಚ:-
ಪ್ರತಿ ತೊಟ್ಟಿಗೆ 6 ಕಿ.ಗ್ರಾಂ. ನಂತೆ  1 ಕಿ.ಗ್ರಾಂ. ಗೆ ರೂ.400/- ದರದಲ್ಲಿ  ರೂ.2400-00     
ಇ) ಇತರೆ ವೆಚ್ಚ:-ರೂ. 342-00
ಒಟ್ಟು ವೆಚ್ಚಗಳುರೂ. 17000-00
ಇ) ಇಲಾಖೆಯ ಪ್ರೋತ್ಸಾಹ ಧನ ರೂ. 8500-00
ಈ) ರೈತರು ಭರಿಸಬೇಕಾಗುವ ವಂತಿಕೆ ರೂ. 8500-00
ಎರಡು ಅಂಕಣದ ಎರೆಹುಳು ಗೊಬ್ಬರ ಘಟಕ ಸ್ಥಾಪನೆಗೆ ತಗಲುವ ವೆಚ್ಚದ ಶೇ50 ಭಾಗ ಅಥವಾ ಪ್ರತಿ ಘನ ಅಡಿಗೆ ರೂ.47.3/- ಮೀರದಂತೆ,  ಗರಿಷ್ಠ ರೂ.8500/- ಮೀರದಂತೆ ಸಹಾಯಧನವನ್ನು ಸಿಮೆಂಟ್ ಬಳಸಿ ನಿರ್ಮಿಸುವ ಸ್ಥಿರ ವಿನ್ಯಾಸದ ಘಟಕಕ್ಕೆ  ನೀಡಬಹುದಾಗಿದೆ. ಅನುದಾನವನ್ನು ಅನುಬಂಧ-1 ರÀಲ್ಲಿರುವಂತೆ ಯೋಜನೆಯಡಿ ಕಾಯ್ದಿರಿಸಲಾಗಿದೆ. ಎರೆಹುಳು ಗೊಬ್ಬರ ಉತ್ಪಾದನಾ ಘಟಕದ ವಿನ್ಯಾಸವನ್ನು ಅನುಬಂಧ-B  ರಲ್ಲಿ  ನೀಡಲಾಗಿದೆ.
ಎಲ್ಲಾ ಘಟಕಗಳ ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಸಾಮಾನ್ಯ ಸೂಚನೆಗಳು:
ಯೋಜನೆಯ ಅನುಷ್ಠಾನಕ್ಕಾಗಿ ನೀಡಲಾಗಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸತಕ್ಕದ್ದು.
ಎಲ್ಲಾ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡುವಾಗ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದ್ಯತೆ ನೀಡತಕ್ಕದ್ದು.
ಬಯೋಡೈಜೆಸ್ಟರ್  ಮತ್ತು ಎರೆಹುಳು ಗೊಬ್ಬರ ಉತ್ಪಾದನಾ ಘಟಕಗಳ ಛಾಯಾ ಚಿತ್ರದ (PHOTO) ಗಳನ್ನು  ಖಡ್ಡಾಯವಾಗಿ ನಿರ್ವಹಿಸುವುದು
ಎಲ್ಲಾ ಯೋಜನೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಹಿಳಾ ರೈತರಿಗೆ ನಿಗಧಿಪಡಿಸಿರುವ ಮೀಸಲಾತಿ ಅನುಪಾತದಂತೆ ಪ್ರಗತಿ ಸಾಧಿಸುವುದು.
ಯೋಜನೆವಾರು / ಘಟಕವಾರು / ತಾಲ್ಲೂಕುವಾರು ಭೌತಿಕ ಮತ್ತು ಆರ್ಥಿಕ ಪ್ರಗತಿ ವರದಿಯನ್ನು ನಿಗಧಿತ ನಮೂನೆಯಲ್ಲಿ ಪ್ರತಿ ಮಾಹೆಯ 5ನೇ ತಾರೀಖಿನೊಳಗಾಗಿ ಇ-ಮೇಲ್  ddamanure@gmail.com ಮುಖಾಂತರ ತಪ್ಪದೇ ಸಲ್ಲಿಸುವುದು.

ಕೃಷಿ ನಿರ್ದೇಶಕರು.



👉 Indian and Karnataka History Notes in       Kannada

👉Geography Notes in Kannada

👉Madguy Indian Geography PDF Book By MadGuy Lab

👉Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು

👉ವಿರುದ್ಧಾರ್ಥಕ ಪದಗಳು Opposite Words In Kannada

👉DAILY CURRENT AFFAIRS AND GK NOTES PDF VERY USEFUL FOR ALL COMPETITIVE EXAMS DOWNLOAD PDF

👉PDF]General knowledge PDF Download 

👉 ಭೂಗೋಳಶಾಸ್ತ್ರ ಬಹು ಆಯ್ಕೆಯ ಪ್ರಶ್ನೋತ್ತರಗಳ PDF Useful for SDA and FDA, PDO COMPETITIVE EXAMS DOWNLOAD PDF

👉 ಗಡಿನಾಡು ಕೋಚಿಂಗ್ ಸೆಂಟರ್ ದವರು ಸಿದ್ಧಪಡಿಸಿದ ಸಾಮಾನ್ಯ ಜ್ಞಾನ ನೋಟ್ಸ್

👉 10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್

👉 ಸ್ವಾತಂತ್ರ್ಯ ಹೋರಾಟದ ಆಯ್ದ ಪ್ರಮುಖ ರಸಪ್ರಶ್ನೆಗಳು.

👉 ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.

👉 ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

👉 ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು

👉 ವಿದೇಶೀ ದಾಳಿಗಳು

👉 ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.

👉 ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


Comments

Popular posts from this blog

Budha History of Ancient India Buddhism.ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ

Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.

21/11/2021 Kannada news paper