exam notes

16/12/2021 Thursday Educational,Health,Employment and other news points in today's news paper cuttings

  *💫🍅 16.12.2021 ಗುರುವಾರದ ಶೈಕ್ಷಣಿಕ,ಆರೋಗ್ಯಹಾಗೂ 18 Fresh ಉದ್ಯೋಗ ಮಾಹಿತಿಗಳು* This cantent copyright owner  👇👇 http://www.kpscvani.com/2021/12/16122021-thursday-educationalhealthempl.html *👇🏿💚👇💜👇🏾❤️👇🏻💙* http://www.kpscvani.com/2021/12/16122021-thursday-educationalhealthempl.html   *<><><><><><><><><><><><>* *✍🏻 ವಿದ್ಯಾರ್ಥಿಗಳ ಬಸ್ ಪಾಸ್ ಮಿತಿ 100 ಕಿ.ಮಿ ಗೆ ?* *✍🏻 ಜಿಯೋ 1 ರೂ ಗೆ  30 ದಿನ ವ್ಯಾಲಿಡಿಟಿ ಆಫರ್ ಪ್ರಕಟ* *✍🏻 ಇಂದು ಮತ್ತೆ ನಾಳೆ ಸರಕಾರಿ ಬ್ಯಾಂಕ್ ನೌಕರರ ಮುಷ್ಕರ* *✍🏻 ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ* *✍🏻 ಬ್ರಿಟನ್ ನಲ್ಲಿ ಕೋವಿಡ್ ಮಹಾಸ್ಪೋಟ* *✍🏻 ನಾಸಾ ಸೂರ್ಯಚುಂಬನ ಹೊಸ ಇತಿಹಾಸ* *✍🏻 ಇನಾಮು ಭೂಮಿಗೆ ಪಹಣೆ:ಮಸೂದೆ ಮಂಡನೆ* *✍🏻 14 ಸದಸ್ಯರು ಮೇಲ್ಮನೆ ಕಲಾಪದಿಂದ ಅಮಾನತು* *✍🏻 ಡಿ.22 ಅಥವಾ 23 ಕ್ಕೆ ಮತಾಂತರ ಮಸೂದೆ ಮಂಡನೆ ?* *✍🏻 ವೋಟರ್ ಐಡಿ ಜೊತೆ ಆಧಾರ ಐಡಿ ಜೋಡಣೆ* *✍🏻 ರೈತರ ಹಣ ಪಾವತಿಗೆ ಅನುಮೋದನೆ* *✍🏻 ಜಾಲತಾಣದ ಮೇಲೆ ಪೋಲಿಸ್ ಹದ್ದಿನ ಕಣ್ಣು* *✍🏻 ಚಿಕಿತ್ಸೆ ಫಲಕಾರಿಯಾಗದೆ ಕ್ಯಾಪ್ಟನ್ ವರುಣ್ ನಿಧನ* *👆🏿 ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ👇🏿* http://www.kpscvani.com/2021/12/16122021-th

Budha History of Ancient India Buddhism.ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ

 


History  Ancient India Buddhism.ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ 👇👇

👉 Indian and Karnataka History Notes in       Kannada

👉Geography Notes in Kannada

👉Madguy Indian Geography PDF Book By MadGuy Lab

👉Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು

👉ವಿರುದ್ಧಾರ್ಥಕ ಪದಗಳು Opposite Words In Kannada

👉DAILY CURRENT AFFAIRS AND GK NOTES PDF VERY USEFUL FOR ALL COMPETITIVE EXAMS DOWNLOAD PDF

👉PDF]General knowledge PDF Download 

👉 ಭೂಗೋಳಶಾಸ್ತ್ರ ಬಹು ಆಯ್ಕೆಯ ಪ್ರಶ್ನೋತ್ತರಗಳ PDF Useful for SDA and FDA, PDO COMPETITIVE EXAMS DOWNLOAD PDF

👉 ಗಡಿನಾಡು ಕೋಚಿಂಗ್ ಸೆಂಟರ್ ದವರು ಸಿದ್ಧಪಡಿಸಿದ ಸಾಮಾನ್ಯ ಜ್ಞಾನ ನೋಟ್ಸ್

👉 10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್

👉 ಸ್ವಾತಂತ್ರ್ಯ ಹೋರಾಟದ ಆಯ್ದ ಪ್ರಮುಖ ರಸಪ್ರಶ್ನೆಗಳು.

👉 ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.

👉 ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

👉 ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು

👉 ವಿದೇಶೀ ದಾಳಿಗಳು

👉 ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.

👉 ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


History  Ancient India Buddhism.ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


[NOTES] History of Ancient India Buddhism.ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


ಹೊಸ ಮತಗಳ ಉದಯ 

ಬೌದ್ಧಧರ್ಮ 

         ಹಿಂದೂ ಧರ್ಮವನ್ನು ವಿರೋಧಿಸಿದ ಎರಡನೆಯ ಧರ್ಮ, ಅರಿವಿನ ದಾರಿಕಾಣದೇ ಜನಸಮುದಾಯ ನರಳುತ್ತಿರುವಾಗ ಅರಿತು ದಾರಿತೋರಿಸುವ ಮಹಾಪುರುಷರು ಅವತರಿಸುತ್ತಾರೆ ಎಂಬ ನಂಬಿಕೆಯನ್ನು ದೃಢಪಡಿಸಿದರು ಬೌದ್ಧಧರ್ಮದ ಪ್ರವರ್ತಕ ಗೌತಮಬುದ್ಧನು ಕೂಡ ಒಬ್ಬ. 

● ಬುದ್ಧನನ್ನು ಏಷ್ಯಾದ ಬೆಳಕು ಎಂದು  ಕರೆದವರು

👉ಡಾ॥ ಕೆನ್ನೇತ್ ಸೌಂಡರ್ಸ್ 

● ಬುದ್ಧನನ್ನು ಏಷ್ಯಾದ ಜ್ಞಾನ ಪ್ರದೀಪ ಎಂದು ಕರೆದವರು.

👉 ಪ್ರೊಫೆಸರ್ ಅಡ್ವಿನ್ ಅರ್ನಾಲ್ಡ್ ಟಾಯ್ನಬಿ  

● ಬುದ್ಧನನ್ನು ಜಗತ್ತಿನ ಜ್ಞಾನ ಪ್ರದೀಪ ಎಂದು ಕರೆದವರು.

👉 ಶ್ರೀಮತಿ ರಿಷ್ ಡೇವಿಡ್ಸ್  

● ಬುದ್ಧನನ್ನು ತಿದ್ದಲಾಗದ ಹೃದಯ ತಿದ್ದಿದ ಮಹಾನುಭಾವ ಎಂದು ಕರೆಯುತ್ತಾರೆ. 


ಗೌತಮ ಬುದ್ಧ ಸಾಮಾನ್ಯ ಶಕ ಪೂರ್ವ 567 ರಿಂದ 487 


● ಈತ ನೇಪಾಳದ ಕಪಿಲವಸ್ತುವಿನ ಲುಂಬಿನಿ ಎಂಬ ಗ್ರಾಮದಲ್ಲಿ ಜನಿಸಿದರು. 

● ತಂದೆ ಶುದ್ಧೋದನ 

● ತಾಯಿ ಮಾಯಾದೇವಿ 

● ಹೆಂಡತಿ ಯಶೋಧರೆ (ಬಿಂಬಾ , ಗೋಪಾ, ಬದ್ಧಾನ ಸುಭದ್ರಿಕಾ)

●  ಮಗ ರಾಹುಲ್ 

● ಸಾಕುತಾಯಿ ಪ್ರಜಾಪತಿ ಗೌತಮಿ 

● ಈತನ ಮೂಲ ಹೆಸರು ಸಿದ್ಧಾರ್ಥ 

 ಪಂಗಡ  ಶಾಕ್ಯ ಪಂಗಡ 

● ಬುದ್ಧನ ಭವಿಷ್ಯ ನುಡಿದ ನೇಪಾಳದ ಸನ್ಯಾಸಿ ಅಸ್ಸೀಮ್  

● ಬುದ್ಧನ ಕುದುರೆಯ ಹೆಸರು ಕಂಥಕ 

● ಸಿದ್ದಾರ್ಥನು ಸನ್ಯಾಸಿಯಾಗಲು ಕಾರಣವಾದ 4 ದೃಶ್ಯಗಳು

 👉 ವೃದ್ಧ ,ರೋಗಿ, ಶವ ,ಸಂನ್ಯಾಸಿ ಇವುಗಳನ್ನು ಮಹಾದರ್ಶನಗಳೆಂದು ಕರೆಯುತ್ತಾರೆ. 

● ಸಿದ್ದಾರ್ಥ 29 ನೇ ವಯಸ್ಸಿನಲ್ಲಿ ಅರಮನೆಯನ್ನು ತ್ಯಜಿಸಿದನು ಘಟನೆಯನ್ನು ಮಹಾಪರಿತ್ಯಾಗ ಎಂದು ಕರೆಯುತ್ತಾರೆ.

● ಸಿದ್ಧಾರ್ಥನ ಮೊದಲಗುರು ಆಧಾರ ಆಧರ ಕಲಮ ಇವನಿಂದ ಕೇವಲ ವೈದಿಕ ಧರ್ಮದ ವಿಚಾರಗಳನ್ನು ತಿಳಿದುಕೊಂಡನು ಯಾವುದೇ ಜ್ಞಾನೋದಯವಾಗಲಿಲ್ಲ. 

● ಈತನ ಎರಡನೆಯ ಗುರು ಉದ್ರಕರಾಮ  ಪುತ್ತ   ಇವನಿಂದ ದೇಹ ದಂಡಿಸುವುದು ಮತ್ತು ಉಪವಾಸ ಆಚರಿಸುವುದು ಕಲಿತುಕೊಂಡನು ದೇಹ ಎಲುಬಿನ ಹಂದರವಾಯಿತು ಯಾವುದೇ ಜ್ಞಾನೋದಯ ವಾಗಲಿಲ್ಲ. ಆದ್ದರಿಂದ ಈತನನ್ನು ಬಿಟ್ಟು ಅಲೆಯುತ್ತಾ ಸಿದ್ಧಾರ್ಥ 35ನೇ ವಯಸ್ಸಿನಲ್ಲಿ ಬಿಹಾರ್ ರಾಜ್ಯದ ಗಯಾದ ಸಮೀಪ ನಿರಂಜನ ನದಿಯ ದಂಡೆಯ ಮೇಲಿನ ಅರಳಿ ಮರದ ಕೆಳಗಡೆ ತಪಸ್ಸಿಗೆ ಕುಳಿತನು ತಪಸ್ಸಿಗೆ ಕುಳಿತ 47ನೇ ದಿನಕ್ಕೆ ಪರಮಜ್ಞಾನ ಲಭಿಸಿ ಬುದ್ಧನಾದನು.

● ಬುದ್ಧ ಎಂದರೆ ಎಲ್ಲವನ್ನೂ ತಿಳಿದವನು ಎಂದರ್ಥ .

● ಈತ ಪಡೆದುಕೊಂಡ ಜ್ಞಾನವನ್ನು ಮೊಟ್ಟಮೊದಲಬಾರಿಗೆ ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಸಾರಾನಾಥದ ಜಿಂಕೆ ವನದಲ್ಲಿ ಐದು ಜನ ಶಿಷ್ಯರಾದ ಕೊಂಡಣ್ಣ ,ಯಪ್ಪು ,ಅನ್ಸಾಜಿ,  ಭಲ್ಪಾಜಿ, ಮಹಾನಾಮ ಎಂಬವರಿಗೆ ಉಪದೇಶ ಮಾಡಿದನು.

● ಬುದ್ಧ ತನ್ನ ರಾಜ್ಯವಾದ ಕಪಿಲ ವಸ್ತುವಿಗೆ ಬಂದು ತನ್ನ ತಂದೆ ಹಾಗೂ ಸಾಕುತಾಯಿ, ಹೆಂಡತಿ ,ಮಗ ಮತ್ತು ಚಿಕ್ಕಪ್ಪನ ಮಕ್ಕಳಾದ ಆನಂದ ಮತ್ತು ದೇವದತ್ತರಿಗೆ ಉಪದೇಶ ನೀಡಿದನು. 

ಹೀಗೆ ಗೌತಮಬುದ್ಧ ಉತ್ತರದ ಗಂಗಾ ನದಿಯ ತೀರದವರೆಗೂ ಸಂಚರಿಸಿ ಬೌದ್ಧಧರ್ಮವನ್ನು ಪ್ರಚಾರ ಮಾಡಿ ಸಾಮಾನ್ಯ ಶಕ ಪೂರ್ವ 487 ರಲ್ಲಿ ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರ ಎಂಬಲ್ಲಿ ಮರಣಹೊಂದಿದನು.ಈ  ಘಟನೆಯನ್ನು ಮಹಾಪರಿನಿರ್ವಾಣ ಎಂದು ಕರೆಯುತ್ತಾರೆ.


ಬೌದ್ಧ ಧರ್ಮದ ತತ್ವಗಳು ಮತ್ತು ಬೋಧನೆಗಳು 

01.ಜಗತ್ತು ದುಃಖದಿಂದ ಕೂಡಿದೆ .

02.ದುಃಖಕ್ಕೆ ಮೂಲ ಕಾರಣ ಆಸೆ .

03.ಆಸೆಯನ್ನು ತೊರೆದಾಗ ಮುಕ್ತಿ ದೊರೆಯುತ್ತದೆ .

04.ಆಸೆಯನ್ನು ತೊರೆಯಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು.

 ಅಷ್ಟಾಂಗ ಮಾರ್ಗಗಳು 

01.ಒಳ್ಳೆಯ ಗುರಿ 

02.ಒಳ್ಳೆಯ ನಂಬಿಕೆ 

03.ಒಳ್ಳೆಯ ಮಾತು 

04.ಒಳ್ಳೆಯ ದೃಷ್ಟಿಕೋನ 

05.ಒಳ್ಳೆಯ ಪ್ರಯತ್ನ 

06.ಒಳ್ಳೆಯ ಕ್ರಿಯೆ 

07.ಒಳ್ಳೆಯ ಯೋಚನೆ

08.ಒಳ್ಳೆಯ  ಆಧ್ಯಾತ್ಮಿಕತೆ 

ಇವುಗಳನ್ನು ಬೌದ್ಧ ಧರ್ಮದ ಚಕ್ರಗಳು ಎಂದು ಕರೆಯುತ್ತಾರೆ.

 ಬೌದ್ಧ ಧರ್ಮದ ಪಂಗಡಗಳು 

01.ಹೀನಾಯಾನ 

● ಇವರು ಬುದ್ಧನನ್ನು ಶ್ರೇಷ್ಠ ವ್ಯಕ್ತಿ ಎಂದರು. 

● ಇವರು ಸಂಪ್ರದಾಯವಾದಿಗಳ ಆಗಿದ್ದರೂ. 

●.ಇವರು ಬುದ್ಧನನ್ನು ಸಂಕೇತ ರೂಪದಲ್ಲಿ ಪೂಜಿಸುತ್ತಿದ್ದರು.

● ಇವರ ಭಾಷೆ ಪಾಲಿ

02. ಮಹಾಯಾನ 

● ಬುದ್ಧನನ್ನು ಮೂರ್ತಿರೂಪದಲ್ಲಿ ಪೂಜಿಸಿದರು.

●ಬುದ್ಧ ದೇವರು ಎಂದು ತಿಳಿದರು.

● ಇವರು ಸುಧಾರಣಾವಾದಿಗಳಾಗಿದ್ದರೂ

● ಇವರ ಭಾಷೆ ಸಂಸ್ಕೃತ 

03.ವಜ್ರಯಾನ 

● ಇವರು ಹೀನಾಯಾನ ಮತ್ತು ಮಹಾಯಾನ ಪಂಥದ ತತ್ವಗಳನ್ನು ಅನುಸರಿಸುವವರು.


ಬೌದ್ಧ ಧರ್ಮದ ಸಾಹಿತ್ಯ 

ತ್ರಿಪೀಠಕಗಳು  :  ಪಾಲಿ ಭಾಷೆಯ ಬ್ರಾಹ್ಮಿ ಲಿಪಿಯಲ್ಲಿವೆ.

01.ವಿನಯ ಪೀಠಕ : ಬೌದ್ಧಧರ್ಮದ ನಿಯಮಗಳನ್ನು ಒಳಗೊಂಡಿದೆ.

02. ಸುತ್ತ ಪೀಠಕ : ಬುದ್ದನ ಜೀವನ ಮತ್ತು ಬೋಧನೆ ಗಳನ್ನು ಒಳಗೊಂಡಿದೆ.

03. ಅಭಿದಮ್ಮ ಪೀಠಕ : ಇದು ಬೌದ್ಧ ಸನ್ಯಾಸಿಗಳ ಸಾಮಾನ್ಯ ನಿಯಮಗಳನ್ನು ಒಳಗೊಂಡಿದೆ. 

ಜಾತಕಗಳು 

ಇವು ಬುದ್ಧನ ಪೂರ್ವಜನ್ಮದ ವೃತ್ತಾಂತ ಕಥೆಗಳನ್ನು ಒಳಗೊಂಡಿವೆ.

 ಬೌದ್ಧ ಧರ್ಮದ ಸಮ್ಮೇಳನಗಳು 

01.ಒಂದನೇ ಸಮ್ಮೇಳನ 👇

========================================

ಸ್ಥಳ    : ರಾಜಗೃಹ 

ವರ್ಷ   : ಸಾಮಾನ್ಯ ಶಕ ಪೂರ್ವ 483 

ಅಧ್ಯಕ್ಷ   : ಮಹಾ ಕಾಶ್ಯಪ 

ಅರಸ   : ಅಜಾತಶತ್ರು 

========================================

ಈ ಸಮ್ಮೇಳನದಲ್ಲಿ ಬೌದ್ಧ ಧರ್ಮದ ಪವಿತ್ರ ಗ್ರಂಥಗಳು ವಿನಯ ಪಿಟಕ ಮತ್ತು ಸುತ್ತಪೀಠಕಗಳನ್ನು ರಚಿಸಲಾಯಿತು.

02. ಎರಡನೇ ಸಮ್ಮೇಳನ 👇

========================================

ಸ್ಥಳ     : ವೈಶಾಲಿ 

ವರ್ಷ   : ಸಾಮಾನ್ಯ ಶಕ ಪೂರ್ವ 383 

ಅಧ್ಯಕ್ಷ   : ಸಭಾಕಮಿ 

ಅರಸ    : ಕಾಲಾಶೋಕ 

========================================

ಈ ಸಮ್ಮೇಳನದಲ್ಲಿ ಬೌದ್ಧ ಸನ್ಯಾಸಿಗಳು ಹತ್ತು ಅಂಶಗಳ ಬೇಡಿಕೆಯನ್ನು ಇಟ್ಟರು ಇದನ್ನು ಸಂಪ್ರದಾಯಗಳು ವಿರೋಧಿಸಿದರು. ಇವರನ್ನು ಸ್ಥವಿರರು ಎಂದು ಕರೆದರು. ಹತ್ತು ಅಂಶಗಳ ಬೇಡಿಕೆಗೆ ಸುಧಾರಣಾವಾದಿಗಳು ಅವಕಾಶ ನೀಡಿದರು. ಇವರನ್ನು ಮಹಾಸಂಧಿಕರು ಎಂದು ಕರೆದರು.

03. ಮೂರನೇ ಸಮ್ಮೇಳನ 👇

========================================

ಸ್ಥಳ   : ಪಾಟಲೀಪುತ್ರ 

ವರ್ಷ  : ಸಾಮಾನ್ಯ ಶಕ ಪೂರ್ವ 250 

ಅಧ್ಯಕ್ಷ  : ಮೊಗ್ಗಲಿಪುತ್ತ 

ಅರಸ   : ಅಶೋಕ 

========================================

ಈ ಸಮ್ಮೇಳನದಲ್ಲಿ ಬೌದ್ಧ ಧರ್ಮ ಪವಿತ್ರ ಗ್ರಂಥದೊಂದಿಗೆ ಅಭಿದಮ್ಮ ಪೀಠವನ್ನು ರಚಿಸಲಾಯಿತು.

04. ನಾಲ್ಕನೇ ಸಮ್ಮೇಳನ 👇

========================================

ಸ್ಥಳ  : ಕುಂಡಲಿವನ 

ವರ್ಷ  : ಸಾಮಾನ್ಯ ಶಕ  100 /102 

ಅಧ್ಯಕ್ಷ  : ವಸುಮಿತ್ರ  

ಉಪಾಧ್ಯಕ್ಷ  : ಅಶ್ವಘೋಷ 

ಅರಸ  : ಕನಿಷ್ಕ 

========================================

ಈ ಸಮ್ಮೇಳನದಲ್ಲಿ ಬೌದ್ಧಧರ್ಮ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಗಡಗಳಾಗಿ ಒಡೆದುಹೋಯಿತು.

05. ಹರ್ಷವರ್ಧನನ ಕಾಲದಲ್ಲಿ ಐದನೇ ಬೌದ್ಧ ಸಮ್ಮೇಳನ ನಡೆದಿದೆ ಸ್ಥಳ  ಪ್ರಯಾಗ್ ಅಧ್ಯಕ್ಷ ಚೀನಾದ ಪ್ರವಾಸಿ  ಹ್ಯೂಯನ್ ತ್ಸಾಂಗ್. 


ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತಗಳು .

========================================

ಜನನ   ➖ ಕಮಲ 

========================================

ಮನೆ ತೊರೆದದ್ದು ➖ ಕುದುರೆ ಕಂಥಕ 

========================================

ತಪಸ್ಸು  ಆಚರಿಸಿದ್ದು  ➖ ಬೋಧಿವೃಕ್ಷ (ಅರಳಿಮರ) 

========================================

ಪ್ರಥಮ ಉಪದೇಶ ➖ ಧರ್ಮಚಕ್ರ (8 ಕಡ್ಡಿಗಳಿವೆ )

========================================

ಮರಣ  ➖ ಸ್ತೂಪಗಳು 

========================================



ವಿಶೇಷ ಅಂಶಗಳು 

👉 ಬುದ್ಧನ ಮೊದಲ ಶಿಷ್ಯ ಆನಂದ 

👉ಬುದ್ಧನ ಸೇವಕ ಚನ್ನ 

👉ಬುದ್ಧನ ಕುದುರೆ ಕಂಥಕ 

👉ಬುದ್ಧನ ಭವಿಷ್ಯ ನುಡಿದ ಸನ್ಯಾಸಿ ಅಸ್ಸೀಮ್

👉ಬುದ್ಧನಿಂದ ಪರಿವರ್ತನೆಯಾದ ಕಳ್ಳ ಅಂಗುಲಿಮಾಲ

 👉ಬುದ್ಧನಿಂದ ಪರಿವರ್ತನೆಯಾದ ವೇಶ್ಯೆ ಅಮ್ರಪಾಲಿ

 👉ಬುದ್ಧನ ಪ್ರಸಿದ್ಧ ಶಿಷ್ಯ ಅನಾಥ ಪಿಂಡಕ 

👉ಬುದ್ಧನ ಪ್ರಸಿದ್ಧ ಶಿಷ್ಯಳು ವಿಶಾಖಳು

👉 ಬುದ್ಧನಿಗೆ ಭಿಕ್ಷೆ ನೀಡಿದ ಮೊದಲ ಶಿಷ್ಯ ಸುಜಾತ (ಅಕ್ಕಿಯ ಪಾಯಸ )

👉ಕೊನೆಯ ಉಪದೇಶ ಕೇಳಿದ ವ್ಯಕ್ತಿ  ಸುಭದ್ರ (ಅಷ್ಟಾಂಗ ಮಾರ್ಗಗಳ ಬಗ್ಗೆ ನಂಬಿಕೆ ಇಡು )

👉ಬುದ್ಧನಿಗೆ ವಿಷಯುಕ್ತ ಹಂದಿ ಮಾಂಸವನ್ನು ತಿನ್ನಿಸಿದ ವ್ಯಕ್ತಿ ಚಂದನ /ಚಂಡ 

👉ಬುದ್ಧನ ಕೊನೆಯ ದಿನಗಳಲ್ಲಿ ಚಿಕಿತ್ಸೆ ನೀಡಿದ ವೈದ್ಯ ಜೀವಕ 

👉ಬೌದ್ಧ ಧರ್ಮದ ಪ್ರಾರ್ಥನಾ ಮಂದಿರಕ್ಕೆ ವಿಹಾರಗಳು ಮತ್ತು ಚೈತ್ಯಾಲಯಗಳು ಎಂದು ಕರೆಯುತ್ತಾರೆ. 

👉 ಭಾರತದಲ್ಲಿ ಅತಿ ದೊಡ್ಡ ಚೈತಾಲಯ ಕಾರ್ಲೆ (ಮಹಾರಾಷ್ಟ್ರ)

👉 ಬೌದ್ಧರ ಸಮಾಧಿಗಳನ್ನು ಸ್ತೂಪಗಳು ಎಂದು ಕರೆಯುತ್ತಾರೆ.

👉ಭಾರತದಲ್ಲಿ ಅತಿ ದೊಡ್ಡ ಸ್ತೂಪ ಸಾಂಚಿ ಸ್ತೂಪ 

👉ದಕ್ಷಿಣ ಭಾರತದ ದೊಡ್ಡ ವಿಹಾರ ಕಲಬುರ್ಗಿಯ ಬೌದ್ಧ ವಿಹಾರ

 👉ಮಲಗಿರುವ ಬುದ್ಧನ ಮೂರ್ತಿ ಕಂಡುಬರುವುದು ಯಾದಗಿರಿ ಜಿಲ್ಲೆ ಶಹಾಪುರ 

👉ಬೌದ್ಧ ಧರ್ಮದಲ್ಲಿ ಸನ್ಯಾಸಿ ದೀಕ್ಷೆ ನೀಡುವ ಕಾರ್ಯಕ್ರಮಕ್ಕೆ ಪಬ್ಬಜ ಎಂದು ಕರೆಯುತ್ತಾರೆ .

👉ಬೌದ್ಧ ಸನ್ಯಾಸಿಗಳನ್ನು ಉಪಾಸಕರು/ ಬಿಕ್ಕುಗಳು ಎಂದು ಕರೆಯುತ್ತಾರೆ.

 ಬೌದ್ಧ ಸನ್ಯಾಸಿ ಸಾಮಾನ್ಯ ಮಂತ್ರ 

● ಬುದ್ಧಂ ಶರಣಂ ಗಚ್ಛಾಮಿ 

● ಧರ್ಮಂ ಶರಣಂ ಗಚ್ಛಾಮಿ 

● ಸಂಘಂ ಶರಣಂ ಗಚ್ಛಾಮಿ 

👉ಮಹಾಯಾನ ಪಂಥವು ಭಾರತ ಅಪಘಾನಿಸ್ತಾನ್, ಮಧ್ಯ ಏಷ್ಯಾ ಮತ್ತು  ಚೀನಾಗಳಲ್ಲಿ ಪ್ರಸಿದ್ಧಿಪಡೆದಿದೆ.

👉 ಹೀನಾಯಾನ ಪಂಥವು ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ ದೇಶದಲ್ಲಿ ಪ್ರಸಿದ್ಧ ಪಡೆದಿದೆ.

👉 ವಜ್ರಯಾನ ಪಂಥವು ಗಾಂಧಾರ ಮತ್ತು ತಕ್ಷಶಿಲಾ ವಿದ್ಯಾಲಯಗಳಲ್ಲಿ ಪ್ರಸಿದ್ಧಿ ಪಡೆದಿತ್ತು. 

👉ಮಹಾಯಾನ ಪಂಥದ ಮೊದಲ ಪುಸ್ತಕ ಲಲಿತ ವಿಸ್ತಾರ

👉ಹೀನಾಯಾನ ಮೊದಲ ಪುಸ್ತಕ ಮಂಜುಶ್ರೀ ಮೂಲ ಕಲ್ಪ

👉ಕರ್ನಾಟಕದಲ್ಲಿ ಬೌದ್ಧರ ನಿರಾಶ್ರಿತರ ಕೇಂದ್ರಗಳು ಮುಂಡಗೋಡ್ (ಉತ್ತರ ಕನ್ನಡ ),ಬೈಲುಕುಪ್ಪೆ (ಮೈಸೂರು) ನಲ್ಲಿವೆ.









Comments

Popular posts from this blog

Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.

KPSC Group C Paper-2 Key Answers 2021

Bmtc jobs